ಕನ್ನಡ ಚಿತ್ರರಂಗ ದಿನೆ..ದಿನೇ ಹೊಸ..ಹೊಸ ತಂತ್ರ ಬಳಸುತ್ತಿದೆ. ಚಿತ್ರದ ಪ್ರಮೋಷನ್ ಗೆ ಬಾಲಿವುಡ್ ನಲ್ಲಿ ಹಳತಾದ ಉಪಾಯಗಳೇ ಇಲ್ಲಿಯ ಮಟ್ಟಿಗೆ ಹೊಸತು ಅನ್ನುವಂತಾಗಿದೆ.ಆದ್ರೂ ನಿಜಾನೇ. ಏಕೆಂದರೆ, ಚಿತ್ರದ ಪ್ರಮೋಸ್ ಗಳನ್ನ ರೆಡಿ ಮಾಡಿ ಚಾನಲ್ ಗಳಿಗೆ ಕೊಟ್ಟರಾಯಿತು ಅನ್ನೊ ಮಂದಿನೇ ಜಾಸ್ತಿ. ಆದರೆ, ದಯಾಳ್ ಅವುಗಳನ್ನ ರಿಲೀಜ್ ಮಾಡುವ ಬಾಲಿವುಡ್ ನ ಟೆಕ್ನಿಕ್ ಬಳಸಿದ್ದಾರೆ.ಒಂದು ರೀತಿ ಇದು ಪ್ರಚಾವೂ ಆಯಿತು. ಹೊಸ ಹೆಜ್ಜೆಗೆ ಕಾಲಿಟ್ಟಂತೆಯಾಯಿತು ಎಂಬ ಯೋಚನೆಯಲ್ಲಿ ದಯಾಳ್ ಖುಷಿ ಪಡ್ತಾಯಿದ್ದಾರೆ. ಅಂದ್ರೆ, ತಮ್ಮ "ಶ್ರೀಹರಿಕಥೆ"ಯ ಪ್ರಮೋಷ್ನಲ್ ಸಾಂಗ್ ಬಿಡುಗಡೆ ಮಾಡಿ ಧಮಾಕಾ ಮಾಡಿದ್ದಾರೆ..
ಹರಿಯ ಕೃಷ್ನನ ಕಥೆ ಹೇಳುವ ಹರಿಕಥೆಗೆ ಒಬ್ಬ ಸೂತ್ರಧಾರನೂ ಇರ್ತಾನೆ. ಚಿತ್ರದ ಕಥೆಯನ್ನ..ಪಾತ್ರ ಪರಿಚಯವನ್ನ ಪ್ರೇಕ್ಷಕರಿಗೆ ಮಾಡಿಸುತ್ತಾನೆ. ಪ್ರೀತಿ-ಪ್ರೇಮ,ಹಾಸ್ಯ, ದು:ಖ ದುಮ್ಮಾನ. ಎಲ್ಲವೂ ಹರಿಕಥೆಯ ಕಂಟೆಂಟ್.
ಚಿತ್ರದ ಕಥೆಗೆ ಕರಾವಳಿ ಬ್ಯಾಗ್ರೌಂಡ್ ಗೆ ಪೂರಕವಾಗಿದೆ.ಕಾರಣ.ಇಲ್ಲಿಯ ರಮಣೀಯ ದೃಶ್ಯಗಳನ್ನ ನೋಡಿಯೇ ದಯಾಳ್ ಚಿತ್ರದ ಕಥೆಗೆ ಅವಳವಡಿಸಿಕೊಂಡಿದ್ದಾರೆ. ಒಂದರ್ಥದಲ್ಲಿ ಶ್ರೀಹರಿಕಥೆಗೆ ಕರಾವಳಿಯ ಭರ್ಪೂರ್ ಟಚ್ ಇದೆ.
ಶ್ರೀ ಹರಿಕಥೆಯ ಪಾತ್ರವರ್ಗದಲ್ಲಿ ಪೂಜಾ ಗಾಂಧಿ ಸೋದರಿ ರಾಧಿಕಾ ಗಾಂಧಿ ಇದ್ದಾರೆ. ಈ ಹಿಂದಿನ ಚಿತ್ರಗಳನ್ನ ಅಭಿನಯ ಇಲ್ಲಿ ಕಂಡು ಬರೋದಿಲ್ಲ. ಹೊಚ್ಚ ಹೊಸದಾಗಿಯೇ ಅಭಿನಯವನ್ನ ಕಲೆಸಿದ್ದಾರೆ ದಯಾಳ್. ಪೂಜಾ ಗಾಂಧಿ ಇಲ್ಲೂ ಪ್ರಯೋಗ ಮಾಡಿದ್ದಾರೆ. ಹುಚ್ಚಿ ನಂತರ ಶ್ರೀಹರಿಕಥೆಯಲ್ಲಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಾಯಿದ್ದಾರೆ. ನಟ ಶ್ರೀಮುರಳಿ ಸಹ ವಿಭಿನ್ನವೇ ಬಿಡಿ. ಸಾಹಸಮಯ ಚಿತ್ರವನ್ನೇ ಮಾಡ್ತಿದ್ದ ಈ ನಟ ಶ್ರೀಹರಿಕತೆಯಲ್ಲಿ ಕಾಮಿಡಿಯನ್ನೂ ಮಾಡಿದ್ದಾರೆ.
ಸದ್ಯಕಂತು ಚಿತ್ರದ ಚಿತ್ರೀಕಣ ಪೂರ್ಣಗೊಂಡಿದೆ.ರಾಯಚೂರಿನ ಸಂಗೀತ ನಿರ್ದೇಶಕ ಸಮೀರ್ ಕುಲಕರ್ಣಿ ಸಿದ್ಧ ಮಾಡಿದ ಹಾಡುಗಳು ಇದೇ 11 ರಂದು ರಿಲೀಜ್ ಆಗಲಿವೆ. ಚಿತ್ರ ಬರುವ ವರ್ಷ ಜನೇವರಿ 1 ರಂದು ತೆರೆ ಕಾಣಲಿದೆ. ಹೊಸ ಉತ್ಸಾಹ,ಹೊಸ ಕ್ರೇಜ್ ನಲ್ಲಿ ದಯಾಳ್ ಬರುತ್ತಿದ್ದಾರೆ. ಬಂದ ಮೇಲೆ ಶ್ರೀಹರಿಕಥೆಯ ಕಥೆ ಏನೋ.
ರೇವನ್